ಭಾರತೀಯ ಸಾಂಪ್ರದಾಯಿಕ ಶೈಲಿಯ ಭಾರಿ ವಿನ್ಯಾಸದ ಚಿನ್ನದ ಆಭರಣಗಳ ಸೆಟ್,

ನಮಸ್ಕಾರ ಸ್ನೇಹಿತರೆ : ಕಳೆದ ಕೆಲವು ದಿನದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಂಡಿದೆ. ಸಾಮಾನ್ಯ ಜನರನ್ನು ಮತ್ತು ಹೂಡಿಕೆದಾರರನ್ನು ಗಮನ ಸೆಳೆದಿದೆ. ಜೂನ್ ತಿಂಗಳಲ್ಲಿ ಚಿನ್ನದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಇಲ್ಲದಿದ್ದರೂ ಮುಂದಿನ ದಿನಮಾನಗಳಲ್ಲಿ ಚಿನ್ನದ ಬೆಲೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಅಂತ ತಜ್ಞರ ಅಭಿಪ್ರಾಯದ ಮೇರೆಗೆ ಕೆಳಗೆ ಎಲ್ಲಾ ಮಾಹಿತಿಯನ್ನು ತಿಳಿಸಿದ್ದೇವೆ ಸಂಪೂರ್ಣವಾಗಿ ಓದಿ……

Thank you for reading this post, don't forget to subscribe!

ಇವಾಗಿನ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಹೇಗಿದೆ?

ಭಾರತದಲ್ಲಿ ಚಿನ್ನ ಭಾರಿ ದುಬಾರಿಯಾಗಿದೆ ಇವಾಗಿನ ಪರಿಸ್ಥಿತಿಯಲ್ಲಿ ಚಿನ್ನ ಕೊಂಡುಕೊಳ್ಳುವುದು ತುಂಬಾ ಕಷ್ಟವಾಗಿದೆ ಜೂನ್ ತಿಂಗಳಾದರೂ ಚಿನ್ನದ ಬೆಲೆ ಯಾವುದೇ ಏರಿಳಿತ ಕಂಡುಬಂದಿಲ್ಲ ಒಂದೇ ಪ್ರಮಾಣದಲ್ಲಿ ಸ್ಥಿರವಾಗಿದೆ. 22 ಕ್ಯಾರೆಟ್ ಮತ್ತು 24 ಕ್ಯಾರೆಟ್‌ನಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಹೊರತು ದೊಡ್ಡ ಪ್ರಮಾಣದಲ್ಲಿ ಏರಿಳಿತ ಕಂಡುಬಂದಿಲ್ಲ.

ಚಿನ್ನದ ಬೆಲೆ ಹೆಚ್ಚಿಗೆ ಆಗಲು ಪ್ರಮುಖ ಕಾರಣವೇನು?

  • ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಚಿನ್ನ ತರಿಸಿಕೊಳ್ಳಲು ಹೆಚ್ಚಿನ ಹಣ ನೀಡುವುದು​
  • ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ನಿರ್ಧಾರ​
  • ಜಾಗತಿಕ ಆರ್ಥಿಕ ಪರಿಸ್ಥಿತಿ​ಡಾಲರ್ ಮೌಲ್ಯದ ಏರಿಳಿತ​
  • ಮಧ್ಯಪ್ರಾಚ್ಯದ ಭೌಗೋಳಿಕ ಉದ್ವಿಗ್ನತೆ​
  • ಭಾರತದಲ್ಲಿನ ಆಮದು ಸುಂಕಗಳು

​ಯಾವಾಗ ಚಿನ್ನ ಖರೀದಿಸಿದರೆ ಲಾಭದಾಯಕ?

ಕೆಲ ತಜ್ಞರ ಪ್ರಕಾರ ಮೊದಲು ಇರುವಂತಹ ಚಿನ್ನದ ಬೆಲೆ ಇವಾಗಿನ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ತಗ್ಗಿದೆ ಇದರಿಂದಾಗಿ ಜನರು ಈಗಿನ ಸಮಯದಲ್ಲಿ ಚಿನ್ನ ಖರೀದಿಸಲು ಒಳ್ಳೆ ಸಮಯ ಮತ್ತು ದೀರ್ಘಕಾಲದ ಹೂಡಿಕೆಗೆ ಒಳ್ಳೆಯ ಲಾಭದಾಯಕವಾಗಿರುತ್ತದೆ.

ಜಗತ್ತಿನಲ್ಲಿ ನಡೆಯುವಂತಹ ಘಟನೆಗಳನ್ನು ಆಧಾರದಲ್ಲಿ ಇಟ್ಟುಕೊಂಡು ಕೆಲ ಮಾರುಕಟ್ಟೆ ತಜ್ಞರು ಮತ್ತು ಮಾರಾಟ ಮಾಡುವ ವ್ಯಕ್ತಿಗಳಿಂದ ಬಂದಿರುವಂತಹ ವಿಶ್ಲೇಷಣೆ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ದರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ದೇಶ ದೇಶಗಳ ನಡುವೆ ಯುದ್ಧ ನಡೆಯುವುದರಿಂದ ಸರಕುಗಳನ್ನು ಆಮದು ಮತ್ತು ರಫ್ತು ಮಾಡಲು ಹೆಚ್ಚಿನ ತೆರಿಗೆ ನೀಡಬೇಕಾಗುತ್ತದೆ ಆದ ಕಾರಣ ಚಿನ್ನದ ಬೆಲೆಯು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ಕೊಳ್ಳುವವರಿಗೆ ಒಂದು ಸಲಹೆ?

ನೀವು ಮದುವೆ ಅಥವಾ ನಿಮ್ಮ ಸ್ವಂತ ಬಳಕೆಗೆ ಚಿನ್ನವನ್ನು ಖರೀದಿಸುವುದಾಗಿ ಯೋಚಿಸಿದರೆ ನೀವು ಹೆಚ್ಚಿನ ದಿನವೂ ಕಾಯುವ ಅಗತ್ಯವಿಲ್ಲ ಈಗ ಇರುವ ಪರಿಸ್ಥಿತಿ ಮತ್ತು ಮುಂದೆ ಆಗುವ ವರದಿಯ ಪ್ರಕಾರ ನೀವು ಈಗಲೇ ಚಿನ್ನವನ್ನು ಕೊಳ್ಳುವುದು ಉತ್ತಮ.

ನಮಗೆ ಒಂದೇ ಸಾರಿ ಕೊಳ್ಳಲು ಆಗುವುದಿಲ್ಲ ಎಂದರೆ ಹಂತ ಹಂತವಾಗಿ ಎಷ್ಟು ಸಾಧ್ಯ ಆಗುತ್ತದೆಯೋ ಮತ್ತು ಎಷ್ಟು ಬೇಗ ನೀವು ಕೊಳ್ಳಲು ಸಾಧ್ಯ ಆಗುತ್ತದೆಯೋ ಹಂತ ಹಂತವಾಗಿ ಚಿನ್ನವನ್ನು ಕೊಂಡುಕೊಳ್ಳುವುದು ಉತ್ತಮ.

ನೀವೇನಾದರೂ ಚಿನ್ನವನ್ನು ಖರೀದಿಸಲು ತೀರ್ಮಾನ ಮಾಡಿದ್ದರೆ ಮೊದಲು ನೀವು ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಚಿನ್ನದ ಮೇಲೆ BIS ಇರುವ ಹಾಲ್‌ಮಾರ್ಕ್ ಆಭರಣಗಳನ್ನೇ ಖರೀದಿಸಿ.

ಚಿನ್ನ ಈಗ ಖರೀದಿಸಬೇಕೆ ಅಥವಾ ಕಾಯಬೇಕೆ?

ತಜ್ಞರ ಪ್ರಕಾರ ಜನರು ಅವಸರ ಪಡದೆ ಒಂದೇ ಬಾರಿ ಚಿನ್ನ ಖರೀದಿಸುವುದಕ್ಕಿಂತ SIP ಮುಖಾಂತರ ಅಂದರೆ ತಿಂಗಳಿಗೆ ಇಂತಿಷ್ಟು ಅಂತ ಪ್ರತಿ ತಿಂಗಳು ಕೊಳ್ಳುವುದು ಉತ್ತಮ ಮತ್ತು ಇದು ದೀರ್ಘಕಾಲದ ವರೆಗೆ ನೀವು ಇದೇ ರೀತಿ ಮಾಡಿದರೆ ನಿಮಗೆ ಯಾವುದೇ ರಿಸ್ಕ್ (Risk) ಇರುವುದಿಲ್ಲ.

ಜಾಗತಿಕ ಪರಿಸ್ಥಿತಿ ಅನುಸಾರವಾಗಿ ತಜ್ಞರು ತಿಳಿಸಿರುವುದೇನೆಂದರೆ ಅಮೆರಿಕದ ಬಡ್ಡಿ ಮತ್ತು ಡಾಲರ್ ಕ್ರಮದಲ್ಲಿ ಮುಂದಿನ ದಿನಗಳಲ್ಲಿ ಅಥವಾ ಮುಂದಿನ ತಿಂಗಳಲ್ಲಿ ಬಂಗಾರದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಮಾರುಕಟ್ಟೆಯ ತಜ್ಞರು ತಿಳಿಸಿದ್ದಾರೆ ಇದರಿಂದ ಜನರು ಮಂತ್ಲಿ ಇನ್ವೆಸ್ಟ್ (Monthly Invest – SIP) ಮಾಡುವುದು ಉತ್ತಮ ಒಂದು ತಿಂಗಳು ಕಮ್ಮಿ ಇದ್ದರೆ ಅದರ ಮುಂದಿನ ತಿಂಗಳು ಅದರ ಡಬಲ್ ಆಗುವ ಸಾಧ್ಯತೆ ಇರುತ್ತದೆ.

ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಸೇರಿದಂತೆ ಕೆಲವು ಸುದ್ದಿಗಳು ಹರಿದಾಡುತ್ತಿವೆ ಚಿನ್ನದ ಬೆಲೆ ಕಡಿಮೆ ಆಗಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹೌದು ಕಡಿಮೆ ಆಗಿದೆ ಆದರೆ ಬಹಳ ರೀತಿಯ ಬೆಲೆ ಕಡಿಮೆ ಆಗಿಲ್ಲ ಸ್ವಲ್ಪ ಅಥವಾ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ ಆದರೆ ದೀರ್ಘಕಾಲದ ಮಾರುಕಟ್ಟೆ ದೃಷ್ಟಿಯಿಂದ ಚಿನ್ನದ ಬೆಲೆ ಸ್ಥಿರವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಸಾಮಾನ್ಯ ಜನರು ಚಿನ್ನ ಖರೀದಿಸುವಾಗ ಮಾಡುವ ತಪ್ಪುಗಳು?

  • ಚಿನ್ನವನ್ನು ಒಂದೇ ಬಾರಿ ಕೊಳ್ಳುವುದು ಮತ್ತು ಹೂಡಿಕೆ ಮಾಡುವುದು ಒಂದೇ ಎಂದು ತೀರ್ಮಾನಿಸುವುದು
  • ಚಿನ್ನದ ಮೇಲೆ ಹಾಲ್‌ಮಾರ್ಕ್ ಅನ್ನು ನೋಡದೆ ಚಿನ್ನವನ್ನು ಕೊಂಡುಕೊಳ್ಳುವುದು
  • ಒಂದೇ ಅಂಗಡಿಯಲ್ಲಿ ವಿಚಾರಿಸುವುದಕ್ಕಿಂತ ಹಲವು ಬೇರೆ ಬೇರೆ ಅಂಗಡಿಗಳಲ್ಲಿ ವಿಚಾರಿಸುವುದು ಉತ್ತಮ
  • ಚಿನ್ನದ ಮೇಲೆ ಮೇಕಿಂಗ್ ಚಾರ್ಜ್ ಗಮನಿಸದಿರುವುದು

ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ವಿವಿಧ ಮಾರ್ಗಗಳು?

  • ಚಿನ್ನದ ಆಭರಣ​
  • ಗೋಲ್ಡ್ ಕಾಯಿನ್‌ಗಳು ಮತ್ತು ಬಾರ್‌ಗಳು​ಗೋಲ್ಡ್
  • ಇಟಿಎಫ್ (ETF)​ಡಿಜಿಟಲ್ ಗೋಲ್ಡ್​
  • ಸವರನ್ ಗೋಲ್ಡ್ ಬಾಂಡ್ (SGB)

ಕಳೆದ 12 ತಿಂಗಳಿಂದ ಜನರಿಗೆ ಚಿನ್ನದ ಮೇಲೆ ಭರವಸೆ ಬಂದಿದೆ ಏಕೆಂದರೆ ಈ 12 ತಿಂಗಳಲ್ಲಿ ಚಿನ್ನದ ಹೂಡಿಕೆಯಲ್ಲಿ ಒಳ್ಳೆಯ ಲಾಭ ಕೊಟ್ಟಿದೆ ಮತ್ತು ಹೂಡಿಕೆದಾರರ ನಂಬಿಕೆ ಸುರಕ್ಷಿತ ಎಂದು ಖಚಿತಪಡಿಸಿದೆ.

ಭಾರತದಲ್ಲಿ ಮದುವೆ ಹಾಗೂ ಹಬ್ಬದ ವಾತಾವರಣದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇರುತ್ತದೆ ಬೇಡಿಕೆ ಇದ್ದಂತೆಲ್ಲ ಬೆಲೆಯು ಕೂಡ ಜಾಸ್ತಿ ಆಗುವ ಸಾಧ್ಯತೆಯು ಕಂಡುಬಂದಿದೆ ಹೂಡಿಕೆದಾರರು ಹೂಡಿಕೆ ಮಾಡುವುದಕ್ಕೆ ಒಳ್ಳೆ ಸಮಯ ಎಂದು ತಜ್ಞರ ಅಭಿಪ್ರಾಯವಾಗಿದೆ.

ಜನ ಯೋಚಿಸುವುದು 10 ಗ್ರಾಂ ಚಿನ್ನ ಖರೀದಿಸಿದರೆ ಎಷ್ಟು ಹಣ ಬೇಕಾಗುತ್ತದೆ ಈಗ ಜನ ಇದರ ಬಗ್ಗೆ ಆಲೋಚಿಸುವುದು ಸರಳವಾಗಿದೆ ನೀವು ಇಂದು ಕರ್ನಾಟಕದಲ್ಲಿ ಕೊಳ್ಳುವುದಾದರೆ 22 ಕ್ಯಾರೆಟ್ ಗೋಲ್ಡ್ 10 ಗ್ರಾಂ ಗೆ ಸುಮಾರು 1,40,000 ಆಗುತ್ತದೆ ಮತ್ತು 24 ಕ್ಯಾರೆಟ್ ಗೋಲ್ಡ್ ಸುಮಾರು 1,50,000 ಆಗುತ್ತದೆ ಇವತ್ತಿನ ದಿನದಲ್ಲಿ ಅಂದರೆ ಜೂನ್ ತಿಂಗಳಲ್ಲಿ ಮುಂದೆ ಹೆಚ್ಚಿಗೆ ಆಗಬಹುದು ಕಡಿಮೆ ಆಗಬಹುದು ಆದರೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಕೇಂದ್ರ ಬ್ಯಾಂಕುಗಳು ಏಕೆ ಚಿನ್ನವನ್ನು ಖರೀದಿಸುತ್ತಿವೆ?

ಪ್ರಪಂಚದ ಅನೇಕ ಬ್ಯಾಂಕುಗಳು ಚಿನ್ನ ಖರೀದಿಸಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗಿವೆ ಏಕೆಂದರೆ ದೇಶವು ಆರ್ಥಿಕತೆ ಪರಿಸ್ಥಿತಿಯಿಂದ ಬಳಲಿದರೆ ಚಿನ್ನವು ದೇಶದ ಆರ್ಥಿಕತೆಗೆ ಸಹಾಯವಾಗುವ ಮುಂದಾಲೋಚನೆಯಿಂದ ಜಗತ್ತಿನ ಹಲವು ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಚಿನ್ನವನ್ನು ಸಂಗ್ರಹಿಸುವ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಪ್ರಾರಂಭಿಸಿದ್ದಾರೆ.

ನಿಮ್ಮ ಮನೆಯಲ್ಲಿ ಹಳೆ ಚಿನ್ನವಿದ್ದರೆ ಈಗ ಅದನ್ನು ಒಳ್ಳೆ ಬೆಲೆಗೆ ಮಾರಬಹುದು ಅಥವಾ ಹಳೆ ಚಿನ್ನ ಕೊಟ್ಟು ಅದಕ್ಕೆ ಸ್ವಲ್ಪ ಹಣ ಹಾಕಿ ಹೊಸ ಚಿನ್ನ ಮಾಡಿಸುವುದಕ್ಕೆ ಜೂನ್ ತಿಂಗಳಲ್ಲಿ ಒಳ್ಳೆಯ ಅವಕಾಶವಿದೆ ಯಾಕೆಂದರೆ ಈ ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ.

ಜನ ಸಾಮಾನ್ಯರು ಆಭರಣಗಳನ್ನು ಖರೀದಿಸುವುದಕ್ಕಿಂತ ಡಿಜಿಟಲ್ ETF ಅಲ್ಲಿ ಹೂಡಿಕೆ ಮಾಡುವುದು ಉತ್ತಮ ಏಕೆಂದರೆ ತಿಂಗಳ ಸಂಬಳದಲ್ಲಿ ಇಂತಿಷ್ಟು ಅಂತ ಮಂತ್ಲಿ ಇನ್ವೆಸ್ಟ್ (Monthly Invest) ಮಾಡುತ್ತಾ ಹೋದರೆ ದೀರ್ಘ ಕಾಲದಲ್ಲಿ ಒಳ್ಳೆಯ ಲಾಭ ಮಾಡಬಹುದು ಎಂದು ತಜ್ಞರು ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ಚಿನ್ನದ ಬೆಲೆ ಕಳೆದ 5 ವರ್ಷಗಳಿಂದ ಏರುತ್ತಲೇ ಬಂದಿದೆ ಜನರು ಈ 5 ವರ್ಷದ ಆಧಾರದಲ್ಲಿ ಇಟ್ಟುಕೊಂಡು ನೀವು ಭಯವಿಲ್ಲದೆ ಹೂಡಿಕೆ ಮಾಡಬಹುದು.

ಕೆಲವು ಸಮಯದಲ್ಲಿ ಚಿನ್ನವು ಕುಸಿತ ಕಾಣಬಹುದು ಜನರು ಇದನ್ನು ಮಾರಲು ಒಳ್ಳೆ ಸಮಯ ಎಂದು ಮಾರಾಟ ಮಾಡುತ್ತಾರೆ ಆದರೆ ಇದು ಹೊಸಬರಿಗೆ ಕೊಳ್ಳಲು ಸಹಾಯ ಮಾಡುತ್ತದೆ ಹೂಡಿಕೆದಾರರು ದೀರ್ಘ ಕಾಲದವರೆಗೂ ಹೂಡಿಕೆ ಮಾಡಿ ಚಿನ್ನ ದಿಡೀರನೆ ಇಳಿತ ಕಂಡಿದೆ ಎಂದು ಮಾರುವುದು ಒಳ್ಳೆಯ ರಿಟರ್ನ್ಸ್ (Returns) ಕೊಡುವುದಿಲ್ಲ ಎಂಬುವುದು ತಜ್ಞರ ಅಭಿಪ್ರಾಯ.

ಚಿನ್ನ ಖರೀದಿಸುವಾಗ ಬಿಲ್ ಯಾಕೆ ಮುಖ್ಯ?

ಕೆಲವು ಜನರು ಚಿನ್ನ ಖರೀದಿಸುವಾಗ ಬಿಲ್ ಪಡೆಯುವುದನ್ನು ಮರೆತುಹೋಗುತ್ತಾರೆ ಆದರೆ ಭವಿಷ್ಯದಲ್ಲಿ ಚಿನ್ನವನ್ನು ಮಾರಾಟ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಬಿಲ್ ಅತ್ಯಂತ ಮುಖ್ಯ ದಾಖಲೆಯಾಗಿರುತ್ತದೆ ಬಿಲ್ ಇದ್ದರೆ ಚಿನ್ನದ ಶುದ್ಧತೆ ಮತ್ತು ಖರೀದಿ ಬೆಲೆಯನ್ನು ಸುಲಭವಾಗಿ ಸಾಬೀತುಪಡಿಸಬಹುದು. ಆದ್ದರಿಂದ ಯಾವಾಗಲೂ ಅಧಿಕೃತ ಬಿಲ್ ಪಡೆಯುವುದನ್ನು ಮರೆಯಬೇಡಿ.

ಚಿನ್ನ ಹೂಡಿಕೆದಾರರ ಮೊದಲ ಆಯ್ಕೆ ಯಾಕೆ?

ಷೇರು ಮಾರುಕಟ್ಟೆ ಕುಸಿತ, ಆರ್ಥಿಕ ಅನಿಶ್ಚಿತತೆ ಅಥವಾ ಜಾಗತಿಕ ಉದ್ವಿಗ್ನತೆಗಳ ಸಂದರ್ಭದಲ್ಲಿ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ವರ್ಷಗಳಿಂದ ಚಿನ್ನದ ಬೇಡಿಕೆ ಸ್ಥಿರವಾಗಿ ಹೆಚ್ಚುತ್ತಿದೆ.

ಚಿನ್ನವನ್ನು ಅನೇಕರು ಸುರಕ್ಷಿತ ಆಸ್ತಿ ಎಂದು ಪರಿಗಣಿಸಿದ್ದಾರೆ ಏಕೆಂದರೆ ಚಿನ್ನವು ಯಾವುದೇ ಕಾರಣಕ್ಕೂ ಕಳ್ಳತನ ಆಗಬಹುದು ಹೊರತು ಬೇರೆ ಯಾವುದೇ ಸಂದರ್ಭದಲ್ಲಿ ಹಾಳಾಗುವ ಪರಿಸ್ಥಿತಿ ಇರುವುದಿಲ್ಲ ಮತ್ತು ಚಿನ್ನವನ್ನು ಬ್ಯಾಂಕಿನಲ್ಲಿ ಇಟ್ಟು ಸಾಲ ಪಡೆಯಬಹುದು ಹಾಗೂ ಕಡಿಮೆ ದರದಲ್ಲಿ ಕೊಂಡುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಬೆಲೆಯಲ್ಲಿ ಮಾರಾಟವಾಗುತ್ತದೆ ಎಂಬುದು ಜನರ ಅಭಿಪ್ರಾಯ ಅದಕ್ಕಾಗಿಯೇ ಬಂಗಾರ ಮನೆಯ ಆಸ್ತಿ ಎಂದು ಕರೆಯುತ್ತಾರೆ.

2026ರಲ್ಲಿ ಚಿನ್ನದ ಭವಿಷ್ಯ ಹೇಗಿದೆ?

ಚಿನ್ನವು 2026 ರಲ್ಲಿ ಕೊನೆಯ ತಿಂಗಳವರೆಗೂ ಚಿನ್ನದ ಬೆಲೆಯು ಏರುತ್ತಲೇ ಇರುತ್ತದೆ ಎಂದು ಹಲವು ವರದಿಯ ಪ್ರಕಾರ ಮಾಹಿತಿ ದೊರೆತು ಬಂದಿದೆ ಹೂಡಿಕೆದಾರರು ಯಾವುದೇ ಭಯವಿಲ್ಲದೆ ಹೂಡಿಕೆ ಮಾಡಲು ಒಳ್ಳೆಯ ಹೆಜ್ಜೆಯಾಗಿದೆ ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಯಾವುದೇ ಭಯವಿಲ್ಲದೆ ಹೂಡಿಕೆ ಮಾಡಿ ಚಿನ್ನವು ಯಾವುದೇ ಕಾರಣಕ್ಕೂ ನಷ್ಟವಾಗದಂತೆ ಕಾಪಾಡುತ್ತದೆ.